KTBS · ಪರಿಷ್ಕೃತ 2024-25 · ೯ನೇ ತರಗತಿ · ಸಿರಿ ಕನ್ನಡ (ಪ್ರಥಮ ಭಾಷೆ)
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು Ninna Muttina Sattigeyanittu Salahu
Chapter summary, hard words and model exam answers for Class 9 Kannada.
Free online summary and notes (Class 9 Kannada). Read it here, no PDF download needed.
About the author
Raghavanka, a leading poet of the Middle Kannada period (around 1225 CE), from Hampi, nephew and disciple of Harihara, called the master of the shatpadi metre; this passage is from his Harishchandra Kavya.
Summary
ಗತಿಸಿಹೋದ ಕಗ್ಗತ್ತಲ ರಾತ್ರಿಯ ಕನ್ನೆಯರು ಹಗಲನ್ನು ನೋಡಲೆಂದು ಬಂದರೋ ಎಂಬಂತೆ ಆ ಸುಂದರಿಯರು ಬಂದರು. ಸಮುದ್ರ ಮಥನದ ಹೊಸ ವಿಷದ ಹೊಗೆಯಿಂದ ಬಾಡಿ ನೊಂದ ಜಲದೇವಿಯರು ಮನುಷ್ಯ ರೂಪ ತಾಳಿದರೋ, ಬ್ರಹ್ಮನು ನೀಲಮಣಿಯಿಂದ ಮಾಡಿದ ಬೊಂಬೆಗಳಿಗೆ ಜೀವ ಬಂದಿತೋ ಎನ್ನುವ ಹಾಗೆ ಆ ಅಂಗನೆಯರು ರಾಜನ ಬಳಿಗೆ ಬಂದರು.
As if the maidens of the departed pitch-dark night had come to behold the daylight, as if the grieving water-goddesses faded by the smoke of the fresh poison from the churning of the ocean had taken human form, as if dolls fashioned by Brahma from sapphire had come alive, the beautiful women approached the king. The poet describes their dazzling beauty through three poetic conjectures.
ಆ ಮಾಯಾಬಲೆಯ ಹೆಣ್ಣುಗಳು ರಾಜನನ್ನು ಕಂಡು, ಶೂರ ರಾಯ, ರಾಯಕಂಟಕ, ರಾಯಜಗಜಟ್ಟಿ, ರಾಯದಲ್ಲಣ, ರಾಯಕೋಳಾಹಳ, ರಾಯಭುಜಬಲಭೀಮ, ರಾಯಮರ್ದನ, ಚಿರಂಜೀವಿಯಾಗು ಎಂದು ಮುಂತಾದ ಬಿರುದುಗಳಿಂದ ಹೊಗಳಿದರು. ಗಾನನಾಯಕಿಯರು ಪ್ರೀತಿಯಿಂದ ತಂಬೂರಿ ಹಿಡಿದು ನಮಸ್ಕರಿಸಿ ಹಾಡಲು ತೊಡಗಿದರು.
Seeing him, the magical maidens praised him with a string of titles: valiant king, thorn to rival kings, world-champion among kings, terror to kings, the uproar among kings, Bhima of mighty arms, slayer of rival kings, may you live long. The chief singers, with affection, took up the tambura, bowed low, and began to sing.
ಹಂದಿಯ ಹಿಂದೆ ಹೋಗಿ ಸುತ್ತಾಡಿ ದಣಿದು ಎರಡನೆಯ ಮುಕ್ಕಣ್ಣನಂತಿರುವ ಗುರುವಿನ ಆಜ್ಞೆ ಮೀರಿ ಮುನಿಯ ವನಕ್ಕೆ ಬಂದ ಭಯ-ದುಃಖ ಇದ್ದರೂ, ಹರಿಶ್ಚಂದ್ರನು ಕನಸ ಕಂಡ ಭಯವನ್ನು ಮೀರಿ ಆ ಹೆಣ್ಣುಗಳ ಸೊಗಸಾದ ಹಾಡಿಗೆ ಮನ ಸೋತು, ಸಮಯಕ್ಕೆ ತಕ್ಕ ಬಹುಮಾನವಾಗಿ ತನ್ನ ಮೈಯ ಎಲ್ಲ ಆಭರಣಗಳನ್ನೂ ಆ ಗಾನರಾಣಿಯರಿಗೆ ಕೊಟ್ಟನು.
Though wearied from chasing the wild boar in circles, grieved at having transgressed the order of his guru (who was like a second three-eyed Shiva), and fearful at having entered the sage's grove, Harishchandra overcame his dream-like fear; charmed by the sweetness of their swelling song, his heart overflowed and as a timely reward he gave all his ornaments to the singing queens.
ಆ ಹೆಣ್ಣುಗಳು, ಬಡತನ ಕಳೆದ ಮೇಲೆ ಆನೆ ಸಿಕ್ಕರೆ ಫಲವೇನು, ಬಾಯಾರಿಕೆ ತೀರಿದ ಮೇಲೆ ತುಪ್ಪ ಸಿಕ್ಕರೆ ಫಲವೇನು, ರೋಗದಿಂದ ಬಿದ್ದ ಮೇಲೆ ರಂಭೆ ಸಿಕ್ಕರೆ ಫಲವೇನು, ಸಾವಿನ ಹೊತ್ತಿನಲ್ಲಿ ಭೂಮಿಯ ಒಡೆತನ ಸಿಕ್ಕರೆ ಫಲವೇನು ಎಂದು ಕೇಳಿ, ಬಿಸಿಲು ಹೊಡೆದು ಬಳಲಿ ಬಿದ್ದ ನಮಗೆ ನೀನು ಒಲಿದು ಮಣಿಯ ಆಭರಣಗಳನ್ನು ಕೊಟ್ಟರೆ ಏನು ಪ್ರಯೋಜನ, ಭೂಪಾಲ ಹೇಳು ಎಂದು ಮುಂದೆ ಹೀಗೆ ಹೇಳಿದರು.
What use is an elephant gained after poverty has passed, what use is ghee got after the thirst is gone, what use is the celestial Rambha won when one has collapsed in sickness, what use is dominion over the earth got at the hour of death? They said: scorched by the fierce sun and fallen exhausted, what use are the jewelled ornaments you graciously give us, O king? Tell us, and they spoke further.
ಕಡಲಲ್ಲಿ ಮುಳುಗುವವನಿಗೆ ತೆಪ್ಪ, ಬಡವನಿಗೆ ಚಿನ್ನ-ನಿಧಿ, ಬಹಳ ರೋಗಿಗೆ ಅಮೃತ ಕೊಟ್ಟರೆ ಅವರು ಪಡೆಯುವ ಸಂತೋಷದಂತೆ ಈ ಹೊತ್ತಿನ ಸಂತೋಷ ಆಗುತ್ತದೆ. ಸುಡುಸುಡುವ ಬಿರುಬಿಸಿಲ ಸೆಕೆಯ ಬಿಸಿ ಉಸಿರು ಬಡಿದು, ಉರಿ ಹತ್ತಿ ಬಾಯಿ ಒಣಗಿ, ಸೆಕೆ ಆವರಿಸಿ ಸಾವು ಮುತ್ತುತ್ತಿದೆ; ಆದ್ದರಿಂದ ನಿನ್ನ ಮುತ್ತಿನ ಸತ್ತಿಗೆಯನ್ನು (ಮುತ್ತಿನ ಕೊಡೆಯನ್ನು) ಕೊಟ್ಟು ನಮ್ಮನ್ನು ಕಾಪಾಡು, ಭೂಭುಜ ಎಂದರು.
Like the joy of a raft given to a drowning man, of treasure given to a pauper, of nectar given to one gravely ill, such joy this moment would bring us. The blistering heat of the scorching sun beats down, our breath turns hot, fire seems to rise, our mouths are parched, the swelter wraps round and death closes in; therefore give us your pearl parasol and save us, O king, they said.
ಸೂರ್ಯವಂಶದಲ್ಲಿ ಹುಟ್ಟಿದ ರಾಜರಿಗೆ ಪಟ್ಟ ಕಟ್ಟುವಾಗ ಈ ಸತ್ತಿಗೆ ಇಲ್ಲದಿದ್ದರೆ ಅರಸುತನವೇ ಸಲ್ಲದು. ಯುದ್ಧರಂಗದಲ್ಲಿ ಇದನ್ನು ಕಂಡ ಶತ್ರುಗಳು ನಿಲ್ಲರು. ಇದರ ತಂಪಾದ ನೆರಳಿನಲ್ಲಿ ಇದ್ದವನಿಗೆ ಎಲ್ಲ ಸಂಕಟ, ಬಡತನ, ರೋಗ, ಅಪಕೀರ್ತಿ, ಸೋಲು, ಭಯ ಎಲ್ಲವೂ ತೊಲಗುತ್ತವೆ; ಇಂತಹ ಸತ್ತಿಗೆಯನ್ನು ಹಾರೈಸಿ ಹಾರೈಸಿ ಬೇಡುವುದು ಸರಿಯೇ, ಕೊಡಲಾಗುವುದೇ, ಹೇಳಿ ಎಂದನು.
Without this parasol at the coronation of kings born in the solar lineage, kingship itself cannot stand; on the battlefield, enemies who behold it do not hold their ground; whoever rests beneath its cool shade is freed from distress, hardship, poverty, disease, dishonour, defeat and fear. Knowing all this well, can such a parasol be given? Tell me, he said.
ಅವರು, ಒಲವಿನಿಂದ ಕೇಳಿದರೆ ಎಲ್ಲವನ್ನೂ ಕೊಡಬಹುದು, ಬಿಡಬಹುದು; ತಾಯಿ, ತಂದೆ, ಪ್ರಿಯಳು, ದೈವ, ಮನಸಾರೆ ನಂಬಿದ ಪರಿವಾರವನ್ನೂ ಕೊಡುವ ಬಿಡುವ ಮಹಾಶೂರರು ಜನರಲ್ಲಿ ಹುಟ್ಟುವುದಿಲ್ಲ ಎಂದು ಹೇಳಿದರೆ ನೀನು ಈಗ ಹೇಳಿದ ಅಷ್ಟನ್ನೂ ಬೇಡಿದರೆ ಕೊಡಬೇಡ, ಆದರೆ ಕೊಡೆಯನ್ನು (ಸತ್ತಿಗೆಯನ್ನು) ಕೊಡು; ಲೋಭವೇಕೆ ಅರಸ ಎಂದರು. ಅದಕ್ಕೆ ಅವನು ಸತ್ತಿಗೆ ಬೇರೆಯಲ್ಲ, ಅದು ನನ್ನ ತಾಯಿ-ತಂದೆ ಇದ್ದಂತೆ ಎಂದನು.
They said: with persuasion one may give up or surrender anything; yet supreme heroes who would give up mother, father, beloved, deity, or the devoted household they trusted with all their heart are not born among men. So if you wish, keep all the things you just named, but give us the parasol. Why be miserly, O king? To which he replied: apart from this, I have no other mother and father.
ಈ ಸತ್ತಿಗೆಯನ್ನು ಬೇರೆ ಜನರಿಗೆ ಕೊಡಬಾರದು; ಇದು ವಂಶಪರಂಪರೆಯಾಗಿ ಬಂದ ಸತಿಯ (ಪತ್ನಿ) ಸಮಾನ, ಪಟ್ಟ ಕಟ್ಟುವಾಗ ಪೂಜಿಸಿಕೊಳ್ಳುವ ದೈವ ಸಮಾನ, ತಂಪಾದ ನೆರಳು ಕೊಡುವ ತಂದೆ ಸಮಾನ, ಕಾಪಾಡುವ ತಾಯಿ ಸಮಾನ, ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಚತುರಂಗಬಲ ಸಮಾನ. ಇಂತಹ ಛತ್ರವನ್ನು ತಿಳಿದು ತಿಳಿದೂ ಬೇಡುವವರನ್ನು ಮೂರು ಲೋಕದಲ್ಲಿ ಅತಿಮರುಳರು (ಬಹು ಹುಚ್ಚರು) ಎನ್ನುವುದಿಲ್ಲವೇ ಎಂದನು.
It cannot be given to others; since it has come down through the lineage it is like a wedded wife, since it is worshipped at the coronation it is like a deity, since it lovingly grants cool shade it is like a father, it sustains like a mother, and since it makes enemies tremble in battle it is like a fourfold army. When this parasol is all these, would not the three worlds call those who knowingly beg for it utter fools? he said.
Hard words & meanings
| ಸತ್ತಿಗೆ | ಛತ್ರಿ; ರಾಜಲಾಂಛನವಾದ ಶ್ವೇತಚ್ಛತ್ರ |
| ಅಬುಧಿ | ಸಮುದ್ರ, ಕಡಲು |
| ಅವನಿ | ಭೂಮಿ, ಧರೆ |
| ಆಸಜ | ಬಳಲಿಕೆ, ದಣಿವು, ಆಯಾಸ |
| ಎಕ್ಕಲ | ಕಾಡುಹಂದಿ |
| ಕಡವರ | ಚಿನ್ನ, ನಿಧಿ, ಸಂಪತ್ತು |
| ಪಸಾಯ | ಉಡುಗೊರೆ, ಬಹುಮಾನ, ಪ್ರಸಾದ |
| ಸಾಲಭಂಜಿಕೆ | ಗೊಂಬೆ, ಪುತ್ಥಳಿ, ವಿಗ್ರಹ |
| ಮೂಜಗ | ಮೂರು ಲೋಕ (ತ್ರಿಜಗತ್ತು) |
| ರುಜೆ | ರೋಗ, ಖಾಯಿಲೆ, ವ್ಯಾಧಿ |
Model exam answers, grammar & audio
You have read the summary. The board-ready model answers, grammar notes, one-touch audio and writing practice for this chapter are part of Lipi.
Sign in to unlockSee it, understand it, hear it read aloud, then write the exam answer with confidence, for a fraction of a tutor cost.