KTBS · ಪರಿಷ್ಕೃತ 2024-25 · ೯ನೇ ತರಗತಿ · ಸಿರಿ ಕನ್ನಡ (ಪ್ರಥಮ ಭಾಷೆ)
ಗುಣಸಾಗರಿ ಪಂಢರಿಬಾಯಿ Gunasagari Pandaribai
Chapter summary, hard words and model exam answers for Class 9 Kannada.
Free online summary and notes (Class 9 Kannada). Read it here, no PDF download needed.
About the author
Dr. Jayamala: a well-known film actress born on 28 February 1959 at Panambur in Dakshina Kannada district; this lesson is an abridged form of her work titled 'Pandaribai'.
Summary
ಪಂಢರಿಬಾಯಿ ಭಾರತೀಯ ಚಿತ್ರರಂಗ ಎಂದೂ ಮರೆಯದ ನಟಿ. ಆಕೆ ನಟಿ ಮಾತ್ರವಲ್ಲ, ದೊಡ್ಡ ವ್ಯಕ್ತಿತ್ವದವರು. ತಾನು ಉರಿದು ಸುತ್ತಲ ಲೋಕಕ್ಕೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಅವರ ಬದುಕು ಇತ್ತು. ಎಷ್ಟೇ ಎತ್ತರಕ್ಕೇರಿದರೂ ಸಾಮಾನ್ಯಳಂತೆ ಬಾಳಿದರು; ಸಿರಿ ಬಂದಾಗಲೂ ತಾನು ನಡೆದು ಬಂದ ಕಷ್ಟದ ದಾರಿಯನ್ನು ಮರೆಯಲಿಲ್ಲ.
Pandaribai is among the actresses Indian cinema can never forget. She was not only an actress but a person of great character; her life resembled a candle that burns itself to light up the world. Even at the peak of her career she lived simply and never forgot the hard road she had walked.
ಪಂಢರಿಬಾಯಿ ೧೯೨೮ರ ಸೆಪ್ಟೆಂಬರ್ ೧೮ರಂದು ಭಟ್ಕಳದಲ್ಲಿ ಹುಟ್ಟಿದರು. ತಂದೆ ರಂಗರಾವ್, ತಾಯಿ ಕಾವೇರಿಬಾಯಿ. ಈ ದಂಪತಿಗಳಿಗೆ ೧೮ ಜನ ಮಕ್ಕಳು; ಅವರಲ್ಲಿ ಪಂಢರಿಬಾಯಿ ಆರನೆಯವರು. ಮೂಲ ಹೆಸರು ಗೀತಾ. ಪಂಢರಾಪುರದ ಪಂಢರಿನಾಥನಲ್ಲಿ ಭಕ್ತಿ ಹೊಂದಿದ್ದ ತಂದೆ ಗೀತಾ ಎಂಬ ಹೆಸರನ್ನು ಪಂಢರಿಬಾಯಿ ಎಂದು ಬದಲಿಸಿದರು. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ; ತೊಡಲು ಎರಡೇ ಬಟ್ಟೆ.
Pandaribai was born on 18 September 1928 at Bhatkal. Her father was Rangarao and mother Kaveribai; she was the sixth of eighteen children. Her original name was Geeta. Her father, a deep devotee of Pandarinath of Pandharapur, changed her name from Geeta to Pandaribai. In childhood there was biting poverty; she is said to have had just two pieces of clothing to wear.
ತಂದೆ ಹರಿದಾಸರಾಗಿ, ತಾಯಿ ಶಾಲಾ ಶಿಕ್ಷಕಿಯಾಗಿ ದುಡಿದು ದೊಡ್ಡ ಕುಟುಂಬವನ್ನು ಸಾಕುತ್ತಿದ್ದರು. ಬಡತನವಿದ್ದರೂ ಶ್ರದ್ಧಾಭಕ್ತಿಯನ್ನು ಶಿಸ್ತಿನಿಂದ ಪಾಲಿಸುತ್ತಿದ್ದರು. ಚಿಕ್ಕಂದಿನಿಂದಲೇ ಪಂಢರಿಬಾಯಿ ಸಂಗೀತ, ಹರಿಕಥೆ, ಕೀರ್ತನೆ ಕಲಿತಿದ್ದರು. ೧೯೪೦ರ ಸುಮಾರಿಗೆ ಕುಟುಂಬ ಮೈಸೂರಿಗೆ ವಲಸೆ ಹೋಯಿತು. ಅಣ್ಣ ವಿಮಲಾನಂದ 'ಆದರ್ಶ ನಾಟಕ ಸಂಘ' ಎಂಬ ಕಂಪನಿ ಕಟ್ಟಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು.
Her father worked as a haridasa and her mother as a school teacher to support the large family; despite poverty they kept their faith and devotion with great discipline. From childhood Pandaribai learned music, harikatha and keerthane, and the creative home atmosphere shaped her artistic personality. To make ends meet the family moved to Mysore around 1940, where her elder brother Vimalananda founded a theatre company called 'Adarsha Nataka Sangha' and ran the household.
ಒಮ್ಮೆ 'ಆದರ್ಶ ನಾಟಕ ಸಂಘ' ಪ್ರದರ್ಶಿಸುತ್ತಿದ್ದ 'ಮುದುಕನ ಮದುವೆ' ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ, ನಾಟಕ ಆರಂಭಕ್ಕೆ ಅರ್ಧ ಗಂಟೆ ಮೊದಲು 'ಬರುವುದಿಲ್ಲ' ಎಂದು ಹೇಳಿ ಕಳಿಸಿದಳು. ಟಿಕೆಟ್‌ಗಳೆಲ್ಲ ಮಾರಾಟವಾಗಿದ್ದವು; ನಾಟಕ ನಿಂತರೆ ದೊಡ್ಡ ಕಷ್ಟ. ಆಗ ಆ ಪಾತ್ರವನ್ನು ತಂಗಿ ಪಂಢರಿಬಾಯಿ ಕೈಲಿ ಮಾಡಿಸಲು ಅಣ್ಣ ವಿಮಲಾನಂದ ನಿರ್ಧರಿಸಿದರು. ಬಿಗಿ ಸಂಪ್ರದಾಯವಾದಿಯಾಗಿದ್ದ ತಂದೆ ಆ ದಿನ ಬಣ್ಣ ಹಚ್ಚಲು ಒಪ್ಪಿದರು; ಇದನ್ನು ಪಂಢರಿಬಾಯಿ ದೈವ ಇಚ್ಛೆ ಎಂದು ನಂಬಿದರು.
Once, in the play 'Mudukana Maduve' staged by 'Adarsha Nataka Sangha', the actress playing a role sent word just half an hour before the show that she would not come. The tickets were fully sold; if the play stopped, the family would face great hardship. Vimalananda thought of having his younger sister Pandaribai play the role. Their father Rangarao, a strict traditionalist, gave his consent that day for her to put on make-up; Pandaribai believed this was the will of God.
ಆ ನಾಟಕ ನೋಡಲು ಪಿಟೀಲು ಚೌಡಯ್ಯ ಮತ್ತು ಸಿನಿಮಾ ಪ್ರವರ್ತಕ ಕೆ. ಹಿರಣ್ಣಯ್ಯ ಬಂದಿದ್ದರು. ಅವರಿಬ್ಬರು ಆಗ 'ವಾಣಿ' ಚಲನಚಿತ್ರ ತಯಾರಿಸುತ್ತಿದ್ದರು. ರಂಗದ ಮೇಲೆ ಪಂಢರಿಬಾಯಿ ಅಭಿನಯ ಕಂಡು ಮೆಚ್ಚಿ ತಮ್ಮ ಚಿತ್ರದಲ್ಲಿ ಸಣ್ಣ ಪಾತ್ರ ಕೊಟ್ಟರು. ಹೀಗೆ ಒಬ್ಬ ಮಹಾನಟಿಯ ಸಿನಿಮಾಯಾನ ಶುರುವಾಯಿತು. ಮುಂದೆ ಎ.ವಿ.ಎಂ. ಸ್ಟುಡಿಯೋ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡು ಮದರಾಸಿಗೆ ಹೋಗಿ ನೆಲೆಸಿ ತಮಿಳು ಕಲಿತರು. 'ಗುಣಸಾಗರಿ' ಚಿತ್ರದಲ್ಲಿ ಹೊನ್ನಪ್ಪ ಭಾಗವತರ್ ಅವರಿಗೆ ನಾಯಕಿಯಾಗಿ ನಟಿಸಿದರು; ಅಲ್ಲಿಂದ ಯಶೋಗಾಥೆ ಆರಂಭ.
Pitilu Chowdayya and the cinema pioneer K. Hiranayya had come to watch that play; at the time they were preparing a film called 'Vani'. Impressed by Pandaribai's performance on stage, they gave her a small role in their film; thus the cinema journey of a great actress began. Later she signed a three-year contract with AVM studio at three hundred rupees a month, settled in Madras, and worked hard to learn Tamil. In the film 'Gunasagari' she played heroine to Honnappa Bhagavatar; from there her tale of success began.
ಚಲನಚಿತ್ರ ಎಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಪಂಢರಿಬಾಯಿ 'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಎಲ್ಲ ಬಗೆಯ ಸ್ತ್ರೀ ಪಾತ್ರಗಳಲ್ಲಿ ನಟಿಸಿದರು; ನಾನೂರಕ್ಕೂ ಮಿಕ್ಕು ಚಿತ್ರಗಳಲ್ಲಿ ನಟಿಸಿ ರಾಷ್ಟ್ರೀಯ ನಟಿ ಎನಿಸಿಕೊಂಡರು. ಚಂದ್ರಮತಿ, ಸತಿ ಸಕ್ಕೂಬಾಯಿ ಮುಂತಾದ ಪಾತ್ರಗಳಲ್ಲಿ ಜನಮಾನಸದಲ್ಲಿ ಉಳಿದರು. ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ಸ್ವಂತ ಚಿತ್ರಗಳನ್ನು ನಿರ್ಮಿಸಿ ಸುತ್ತಲಿನವರಿಗೆ ನೆರವಾದರು; 'ಕೆರೆಯ ನೀರನ್ನು ಕೆರೆಗೆ ಚೆಲ್ಲುವ' ಈ ಮಾದರಿ ಎಲ್ಲರಿಗೂ ಆದರ್ಶ.
When cinema was still looked down upon, Pandaribai acted in every kind of female role, as the saying goes 'there is no leaf the goat will not touch'. Acting in over four hundred films across all South Indian languages and Hindi, she came to be called a national actress. She lived on in people's hearts as Chandramati and Sati Sakkubai. Even at the peak of success she produced films such as Santa Sati Sakkubai, Rayara Sose, Annapurna and Keralida Simha and helped those around her, an ideal of 'returning the lake's water to the lake'.
ಡಾ. ರಾಜಕುಮಾರ್ ಮತ್ತು ಶಿವಾಜಿ ಗಣೇಶನ್ ಅವರ ಮೊದಲ ಚಿತ್ರಗಳ ನಾಯಕಿ ಪಂಢರಿಬಾಯಿ. ೧೯೬೫ರಲ್ಲಿ 'ಸತ್ಯ ಹರಿಶ್ಚಂದ್ರ' ಚಿತ್ರದ ಚಂದ್ರಮತಿ ಪಾತ್ರಕ್ಕೆ ಪ್ರಧಾನಿ ಇಂದಿರಾಗಾಂಧಿಯವರಿಂದ ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿ; ಅದೇ ವರ್ಷ ತಮಿಳುನಾಡಿನ 'ಕಲೈಮಾಮಣಿ'; ೧೯೯೪ರ ರಾಜ್ಯೋತ್ಸವ, ೧೯೯೫ರ ಡಾ. ರಾಜಕುಮಾರ್ ಪ್ರಶಸ್ತಿ; ೨೦೦೦ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ. ೧೯೭೧ರಲ್ಲಿ ಮಂಡ್ಯದ ರಾಮರಾಯರನ್ನು ವಿವಾಹವಾದರು. ೧೯೯೪ರ ರಸ್ತೆ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡರೂ ನಟನೆ ಮುಂದುವರಿಸಿದರು. ೨೯.೦೧.೨೦೦೨ರಂದು ನಿಧನರಾದರೂ ಕಲಾರಸಿಕರ ಮನಸ್ಸಿನಲ್ಲಿ ಅಮರರಾದರು.
It was a great honour that Pandaribai was the heroine of the first films of Kannada's Dr. Rajkumar and Tamil's Shivaji Ganesan. In 1965 she received the National Best Actress award from Prime Minister Indira Gandhi for the role of Chandramati in 'Satya Harishchandra'; the same year Tamil Nadu honoured her with 'Kalaimamani'. Karnataka gave her the Rajyotsava award in 1994, the Dr. Rajkumar award in 1995, and a Filmfare lifetime achievement award in 2000. In 1971 she married Ramaraya of Mandya. Though she lost one hand in a 1994 road accident, she carried on her acting without losing heart. She passed away on 29.01.2002, but remained immortal in the hearts of art lovers.
Hard words & meanings
| ಉತ್ತುಂಗ | ಶ್ರೇಷ್ಠ ಎತ್ತರ, ಶಿಖರ |
| ಅಂತಃಕರಣ | ಮನಸ್ಸಿನ ಒಳಗಿನ ಮೃದು ಭಾವ, ಕನಿಕರ |
| ಸೃಜನಶೀಲ | ಸೃಷ್ಟಿಶೀಲ, ರಚನಾತ್ಮಕ |
| ಯಶೋಗಾಥೆ | ಸಾಧನೆ ಮತ್ತು ಕೀರ್ತಿಯ ಕಥನ |
| ಪರಕಾಯ ಪ್ರವೇಶ | ತನ್ನ ಅಸ್ತಿತ್ವ ಮರೆತು ಬೇರೊಂದು ಪಾತ್ರದ ಒಳಹೊಕ್ಕು ಅಭಿನಯಿಸುವುದು |
| ತನ್ಮಯತೆ | ಆಳವಾದ ಏಕಾಗ್ರತೆ, ಆ ಭಾವದಲ್ಲಿ ಲೀನವಾಗುವಿಕೆ |
| ಆದರ್ಶಪ್ರಾಯ | ಅನುಸರಿಸಲು ಯೋಗ್ಯವಾದ ಮಾದರಿ, ಆದರ್ಶದಂತಿರುವ |
| ಅಪರೂಪ | ತೀರಾ ವಿರಳ, ಅಸಾಧಾರಣ |
Model exam answers, grammar & audio
You have read the summary. The board-ready model answers, grammar notes, one-touch audio and writing practice for this chapter are part of Lipi.
Sign in to unlockSee it, understand it, hear it read aloud, then write the exam answer with confidence, for a fraction of a tutor cost.