KTBS · ಪರಿಷ್ಕೃತ 2024-25 · ೧೦ನೇ ತರಗತಿ · ಸಿರಿ ಕನ್ನಡ (ಪ್ರಥಮ ಭಾಷೆ)
ನಾನು ಪ್ರಾಸ ಬಿಟ್ಟ ಕತೆ Naanu Praasa Bitta Kate
Chapter summary, hard words and model exam answers for Class 10 Kannada.
Free online summary and notes (Class 10 Kannada). Read it here, no PDF download needed.
About the author
Manjeshwara Govinda Pai (1883-1963), Kannada's first Rashtrakavi (national poet), a poet and researcher proficient in about 25 languages.
Summary
ಹಿಂದೆ ಒಂದು ಕಾಲವಿತ್ತು. ಆಗ ಕವಿಗಳು ಒಂದೇ ಒಂದು ಮಾತ್ರೆ ತಪ್ಪದಂತೆ ಛಂದಸ್ಸಿಗೆ ಸರಿಯಾಗಿ ಕವಿತೆ ಬರೆಯಬೇಕಿತ್ತು. ಪ್ರಾಸ, ಛಂದಸ್ಸು, ಶಾಸ್ತ್ರ ಇವೆಲ್ಲಾ ಗೊತ್ತಿರಬೇಕಿತ್ತು. ಅಂಥ ಕಾಲದಲ್ಲಿ ಪ್ರಾಸ ಬಿಟ್ಟು ಬರೆಯುತ್ತೇನೆ ಎಂದರೆ ಅದು ದೊಡ್ಡ ಕ್ರಾಂತಿಕಾರಕ ಮಾತೇ ಆಗಿತ್ತು.
Once there was a time when poets had to compose strictly by metre, without even a single syllabic error. Deep knowledge of prosody, old and middle Kannada words, poetics and literary theory was expected. In such an age, to say one would write without praasa was itself a revolutionary declaration.
ಮಂಜೇಶ್ವರ ಗೋವಿಂದ ಪೈಗಳು ಕನ್ನಡದಲ್ಲಿ ಮೊದಲ ಬಾರಿಗೆ ಪ್ರಾಸ ಬಿಟ್ಟು ಬರೆಯುವ ಧೈರ್ಯ ತೋರಿಸಿದರು. ಅವರು ಬಿಟ್ಟದ್ದು ಆದಿಪ್ರಾಸವನ್ನು ಮಾತ್ರ. ಆದರೂ ಕೆಲವು ಪಂಡಿತರು ಅವರನ್ನು ಕೀಳಾಗಿ ನೋಡಿದರು, ಕವಿಗಳ ಗುಂಪಿನಿಂದ ಹೊರಗೆ ಇಟ್ಟರು. ಮುಂದೆ ಬೇರೆ ಕವಿಗಳೂ ಪ್ರಾಸ ಬಿಟ್ಟು ಬರೆಯಲು ತೊಡಗಿದರು; ಕಾವ್ಯಕ್ಕೆ ಭಾವವೇ ಮುಖ್ಯ ಎಂಬ ತರ್ಕ ಬೆಳೆಯಿತು.
Govinda Pai was the first in Kannada to dare to drop only the aadipraasa (initial rhyme). For this alone, some scholars declared rhyme-less verse was not poetry and excluded him from the ranks of poets. Later, other poets too boldly abandoned praasa; with new poetry the end-rhyme was also dropped, and the argument grew that emotion, not rhyme, is what matters in poetry.
೧೮೯೫ರ ಫೆಬ್ರವರಿ. ಮಂಗಳೂರಿನ ಮನೆಯಲ್ಲಿ ತಮ್ಮನ ನೂಲುಮದುವೆಯ ಸಿದ್ಧತೆ. ಚಪ್ಪರ ಹಾಕಿದ್ದರು, ಲಡ್ಡು-ಮಂಡಿಗೆ-ಸೇವಿಗೆ ಮಾಡುತ್ತಿದ್ದರು, ಎಲ್ಲಾ ಗದ್ದಲ. ಆ ಗದ್ದಲದ ನಡುವೆ ಕುಗ್ಗಿದ ಕೊರಳಿನಲ್ಲಿ ಒಂದು ಹಾಡು ಕೇಳಿಸಿತು: ಅಡವಿಗೆ ಪೋಪರೇನೇ ಕಂದಯ್ಯಾ, ಅಡವಿಯೊಳಗೆ ಬಲು ಕಡುಖೂಳ ಮೃಗಗಳು ಬಿಡದೆ ಬಾಧಿಪವೋ ನಿನ್ನ.
It was the last week of February 1895. At their Mangalore home, preparations for the younger brother's sacred-thread ceremony were on. Under the pandal, sweets like laddu, mandige and sevige were being made amid much bustle, like a clamour of parrots in a maize field. In the midst of that noise, a song came in a feeble voice: 'Are you going to the forest, dear child? In the forest fierce wild beasts will harm you without ceasing.'
ಆ ಹಾಡು ಕೇಳಿದ ಕೂಡಲೇ ಅವರಿಗೆ ಏನೋ ಆಯಿತು. ಚಪ್ಪರದ ಗದ್ದಲ ಕೇಳಿಸಲಿಲ್ಲ. ನೆಟ್ಟಗೆ ಹೋಗಿ ಅಭ್ಯಾಸದ ಪುಸ್ತಕ ಹಿಡಿದು ಒಂದು ಸಣ್ಣ ಏಕಾಂಕ ನಾಟಕವನ್ನು ಸಂಜೆಯೊಳಗೆ ಬರೆದು ಮುಗಿಸಿದರು. ಅದರಲ್ಲಿ ತಾಯಿ-ತಂದೆಯ ಒಬ್ಬನೇ ಮಗ ಕಾಡಿಗೆ ಹೋಗುತ್ತಾನೆ, ಹೋಗಬೇಡ ಎಂದು ಅವರು ಬೇಡಿಕೊಳ್ಳುತ್ತಾರೆ. ಆ ದಿನ ಅವರ ಜೀವಮಾನದ ಮರೆಯಲಾಗದ ದಿನವಾಯಿತು.
The moment that song fell on his ears, something stirred in him and the din of the pandal vanished from his hearing. He went straight, took his exercise book, and within the evening finished writing what could be called a one-act play in everyday speech. In it, the only son of his parents goes to the forest, and they plead with him not to go. That day, etched in memory like a tattoo, he could never forget.
ಒಂದೂವರೆ ವರ್ಷ ಹಿಂದೆ, ೧೮೯೩ರಲ್ಲಿ ಸಾಂಗಲಿಯ ಮರಾಠಿ ನಾಟಕ ಮಂಡಳಿ ಮಂಗಳೂರಿಗೆ ಬಂದಿತ್ತು. ಅವರ ನಾಟಕಗಳನ್ನು ನೋಡಿ, ತಾವೂ ಹಾಗೆ ಬರೆಯಬೇಕೆಂದು ಆಸೆಯಾಗಿತ್ತು. ಮಂಜೇಶ್ವರದಲ್ಲಿ ಬೆಳೆದ ಅವರು ಚಿಕ್ಕಂದಿನಿಂದ ಯಕ್ಷಗಾನದ ಆಟಗಳನ್ನು ನೋಡಿ ಬೆರಗಾಗಿದ್ದರು. ೧೮೯೫ರ ಮೇ ತಿಂಗಳಲ್ಲಿ 'ಮಕರಾಕ್ಷನ ಕಾಳಗ' ಎಂಬ ಯಕ್ಷಗಾನ ಬರೆಯಲು ತೊಡಗಿದರು; ಮೂರನೆಯ ಒಂದು ಭಾಗ ಬರೆದರೂ ಮನಸ್ಸಿಗೆ ಒಗ್ಗದೆ ಹರಿದು ಹಾಕಿದರು.
In 1893 a Marathi drama troupe from Sangli had come to Mangalore; having seen many of their plays, his mind yearned to write such things. Raised in his mother's family home at Manjeshwar, he had from childhood watched Yakshagana Dashavatara plays from Kartika to Vaishakha and been filled with wonder. In May 1895 he set out to write a Yakshagana called 'Makaraakshana Kaalaga'; though he wrote a third of it, it did not satisfy him and he tore it up.
ಬಾಸೆಲ್ ಮಿಶನ್‌ನವರು ಪ್ರಕಟಿಸಿದ್ದ 'ಹಳಗನ್ನಡ ವ್ಯಾಕರಣ ಸೂತ್ರಗಳು' ಓದಿ, ವೃತ್ತ-ಕಂದ-ಷಟ್ಪದಿಗಳ ಲಕ್ಷಣ ಕಲಿತರು; ಜೈಮಿನಿಭಾರತ, ಗದುಗಿನ ಭಾರತದಂಥ ಮಹಾಕಾವ್ಯಗಳನ್ನು ಓದಿದರು. ೧೮೯೬ರಲ್ಲಿ ಒಂದು ಘಟನೆ: ಸೋದರರ ಜಗಳದಲ್ಲಿ ತಮ್ಮಂದಿರು 'ಇವನು ಕವನಿಸುತ್ತಾನೆ' ಎಂದು ತಾಯಿಗೆ ದೂರಿತ್ತರು. ಕವನ ಮಾಡಿದರೆ ಹುಚ್ಚು ಹಿಡಿಯುತ್ತದೆ ಎಂದು ನಂಬಿದ್ದ ತಾಯಿ ರೇಗಿ ಅವರನ್ನು ದಂಡಿಸಿದರು. ಆಮೇಲೆ ಮನೆಯಲ್ಲಿ ಬರೆಯಲಾಗದೆ ಬೀದಿಯಲ್ಲೂ ಶಾಲೆಯಲ್ಲೂ ಕವನಿಸುತ್ತಿದ್ದರು.
He read 'Halagannada Vyakarana Sutragalu', published by the Basel Mission in 1889, learning the features of vritta, kanda and shatpadi metres, and read great works like Jaiminibharata and Gadugina Bharata, writing many verses and tearing them up. In 1896, during a quarrel, his younger brothers complained to their mother that 'he composes verses'. Believing, from the case of the Yakshagana poet Vasudeva Prabhu of Mulki who went mad after composing, that versifying brings madness, his mother grew angry and punished him. From then, unable to write at home, he composed in the street and at school.
೧೮೯೯-೧೯೦೦ರಲ್ಲಿ ಪಂಜೆ ಮಂಗೇಶರಾಯರು ಅವರ ಕನ್ನಡ ಅಧ್ಯಾಪಕರಾದರು. ಪ್ರಾಸ ಬಿಡಬೇಕೆಂದು ಮನಸ್ಸಿಗೆ ಮತ್ತೆ ಮತ್ತೆ ಬರುತ್ತಿತ್ತು, ಆದರೆ ಭಯದಿಂದ ಬರೆಯಲಾಗುತ್ತಿರಲಿಲ್ಲ. ೧೯೦೦ರಲ್ಲಿ 'ಸುವಾಸಿನಿ' ಪತ್ರಿಕೆಯಲ್ಲಿ ಅವರ ಕವಿತೆ ಮೊದಲ ಬಾರಿ ಅಚ್ಚಾಯಿತು. ಕೊನೆಗೆ ೧೯೧೧ರ ಏಪ್ರಿಲ್‌ನಲ್ಲಿ ನವಸಾರಿಯಲ್ಲಿ ಒಂದು ಮುಂಜಾನೆ ಹಠಾತ್ತಾಗಿ 'ಪ್ರಾಸವನೀಗಲೆ ತೊರೆದುಬಿಡುವುದೇ ನಿಶ್ಚಯಂ' ಎಂದು ತೀರ್ಮಾನಿಸಿದರು. ಆಗಲೇ ರವೀಂದ್ರನಾಥ ಠಾಕೂರರ 'ಭಾರತ ಲಕ್ಷ್ಮೀ' ಗೀತೆಯನ್ನು ಪ್ರಾಸವಿಲ್ಲದೆ ಕನ್ನಡಕ್ಕೆ ತಂದರು; ಅವೇ ಪ್ರಾಸರಹಿತ ಮೊದಲ ಕವಿತೆಗಳಾಗಿ ಅಚ್ಚಾದವು.
In 1899-1900, Panje Mangesharaya became his Kannada teacher. Though the urge to drop praasa kept rising, his mind hesitated unless those who knew encouraged him. In July 1900, three rhymed kanda verses appeared in the monthly 'Suvasini' and won a prize; that was the first time his poetry was printed. In April 1911, at Navasari in Baroda state, while pacing one morning, he suddenly resolved: 'What comes and goes is God's will; to abandon praasa now itself is decided.' He at once rendered Rabindranath Tagore's Bengali song 'Bharata Lakshmi' into Kannada; those rhyme-less poems, published in 'Swadeshabhimani' after he returned home, were the first of their kind to be printed.
Hard words & meanings
| ಆದಿಪ್ರಾಸ | ಪದ್ಯದ ಪ್ರತಿ ಸಾಲಿನ ದ್ವಿತೀಯಾಕ್ಷರ ಸಮಾನವಾಗಿರಬೇಕೆಂಬ ಛಂದಸ್ಸಿನ ನಿಯಮ. |
| ಛಂದಸ್ಸು | ಪದ್ಯದ ಮಾತ್ರೆ, ಗಣ, ಲಯಗಳನ್ನು ನಿಯಂತ್ರಿಸುವ ಶಾಸ್ತ್ರ. |
| ಕ್ರಾಂತಿಕಾರಕ | ಬೇರೂರಿದ ಪದ್ಧತಿಯನ್ನು ಮೀರಿ ದೊಡ್ಡ ಪರಿವರ್ತನೆಯನ್ನು ತರುವಂಥದ್ದು. |
| ನೂಲುಮದುವೆ | ಬ್ರಹ್ಮೋಪದೇಶ ಮಾಡುವ ಉಪನಯನ ಸಂಸ್ಕಾರ; ಯಜ್ಞೋಪವೀತ ಧಾರಣೆ. |
| ಚಪ್ಪರ | ಮದುವೆ ಮುಂತಾದ ಸಮಾರಂಭಗಳಿಗೆ ಹಾಕುವ ತಾತ್ಕಾಲಿಕ ಮಂಟಪ. |
| ಅಡವಿ | ಕಾನನ, ಅರಣ್ಯ, ಕಾಡು. |
| ಮೃಗ | ಕಾಡಿನ ಜಂತು, ಪ್ರಾಣಿ. |
| ಏಕಾಂಕ | ಒಂದೇ ಅಂಕವನ್ನು ಹೊಂದಿರುವ ಚಿಕ್ಕ ನಾಟಕ ಪ್ರಕಾರ. |
Model exam answers, grammar & audio
You have read the summary. The board-ready model answers, grammar notes, one-touch audio and writing practice for this chapter are part of Lipi.
Sign in to unlockSee it, understand it, hear it read aloud, then write the exam answer with confidence, for a fraction of a tutor cost.